Tuesday, November 29, 2011

Manjunath Hegde speaks on 13

೧೩, ಮಾರ್ಗೋಸ ಮಹಲ್ ಬಗ್ಗೆ ಇಷ್ಟು ಹೇಳಿದ್ರು ಕಮ್ಮಿನೆ.. ರಂಗಭೂಮಿಯ ಬಗ್ಗೆ ಅರಿಯಲು ಬಂದವ ನಾನು.

ಮೊತ್ತ ಮೊದಲಿಗೆ, ಕಥೆ ತುಂಬಾ ಹಿಡಿಸಿತು.. ಅದನ್ನ ನಿರೂಪಣೆ ಮಾಡಿದ ರೀತಿನೂ ತುಂಬಾ ಇಷ್ಟ ಆಯ್ತು..

"ಚಂದನ್" ಕನ್ನಡದಲ್ಲಿ ತುಂಬಾ ಚೆನ್ನಾಗಿ ಬರೆದಿದ್ದಾರೆ... ಪ್ರತಿಯೊಂದು ಪಾತ್ರಗಳಿಗೂ ಒಳ್ಳೆ ಜೀವವನ್ನು ಕಥೆಯಲ್ಲಿ ತುಂಬಿದ್ದಾರೆ... ಕಥೆ ಹಾಗೂ ಅದಕ್ಕೆ ಬಳಸುವಂತ ಆಯಾಮಗಳ ಮಾಹಿತಿ ಒಂದೇ ಸಲ ಆಶ್ಚರ್ಯ ಹಾಗೂ ರೋಮಾಂಚನ ಉಂಟು ಮಾಡಿತು..

ಇನ್ನೊಂದು ಅಂದ್ರೆ, ಕಥೆಗೆ ೫ ಆಯಾಮಗಳನ್ನು ನೀಡುವ ಯೋಚನೆ ಹಾಗೂ ಅದನ್ನ ಕಾರ್ಯರೂಪಗೊಳಿಸಿದ ರೀತಿ.. ಅದೇ ಒಂಥರಾ ರೋಮಾಂಚನವನ್ನ ಕೊಡ್ತು..

(ಭಾರತದಲ್ಲಿ ಮೊತ್ತ ಮೊದಲನೇ ಬಾರಿಗೆ ಕಾರ್ಯರೂಪಕ್ಕೆ ತಂದ ಪ್ರಯೋಗ !!) ..

ಸತೀಶ್ ಚಂದ್ರ ಅವ್ರ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿ.. ತುಂಬಾ ದೂರ ದರ್ಶಿತ್ವ ಇಟ್ಟುಕೊಂಡಿರೋ ವ್ಯಕ್ತಿ.. ಯಾವ ಯಾವ ಪಾತ್ರಗಳಿಗೆ ಯಾರ ಯಾರನ್ನ ಆಯ್ಕೆ ಮಾಡಬೇಕೋ ಅದಕ್ಕೆ ಸರಿಯಾಗಿ ಮಾಡಿದ್ರು..

ಪ್ರತಿಯೊಬ್ಬರ ಅವ್ರು ತಗೋತ ಇದ್ದ ಕಾಳಜಿನೂ ಅಷ್ಟೇ ಇಷ್ಟ ಆಯ್ತು.. ಅವರ 'ಹುಡುಗರಾ' ಅಂತೂ ಈಗ ಎಲ್ಲರ ಬಾಯಲ್ಲಿ ಹರಿದಾಡ್ತಾ ಇದೆ.. !!

ನಾಟಕದ ಎಲ್ಲ 'ತಯಾರಿ ತರಗತಿಗಳು ' ತುಂಬಾ ಅನಂದಮಯವಾಗಿದ್ದವು....ಒಳ್ಳೆ ಸ್ನೇಹಿತರುಗಳ ಭೇಟಿ ಆಯ್ತು..ತಂಡದಲ್ಲಿ ಇದ್ದಂತ ಎಲ್ಲರೂ ಒಂದೇ ಕುಟುಂಬದ ಜನರಂತೆ ಇದ್ವಿ....

ರಂಗಭೂಮಿಯೆಂಬ ವಿಶಾಲ ಸಾಗರದಲ್ಲಿ ಈಜಲು ಹೊರಟವನಿಗೆ ಕೆಲವೊಂದು ಮೂಲಭೂತ ವಿಷಯಗಳ ಅರಿವು ದೊರಕಿತು..

'ರಘು ದೀಕ್ಷಿತ್ ' ಕೊಟ್ಟಿದಾರೆ ನಾಟಕಕ್ಕೆ ಅಂತ ಗೊತ್ತಾದ ತಕ್ಷಣನೇ ಏನೋ ಒಂಥರಾ ಪುಳಕಿತವಾದ ಭಾವ..

"ವಸಿಷ್ಠ" ನಟನೆ ಇಷ್ಟ ಆಯ್ತು...

'ಮೊನಿಶ್ ' ಸ್ವರ ತುಂಬಾನೇ ಚೆನ್ನಾಗಿದೆ.. ಅವ್ರ ನಟನೆಯೂ ಕೂಡ..

'ಚಂದನ್ ಮತ್ತೆ ನಿರಂಜನ್ ' ಮಾತುಗಳ ಮಧ್ಯೆ ಹಾಸ್ಯ ಚಟಾಕಿಗಳು ತುಂಬಾನೇ ಖುಷಿಯಗ್ತಾ ಇತ್ತು..

"ಸಂತೋಷ್ ಬಿ ಎಸ್" ಅವ್ರ ನಾಟಕದ 'ಸಮರ್ಪಣ ಮನೋಭಾವ ' ತುಂಬಾನೇ ಪ್ರಶಂಸನೀಯ...

'ಪ್ರವೀಣ್ 'ರಥ ' ' ಅವ್ರ ದಷ್ಟ ಪುಷ್ಟ ಮೈಕಟ್ಟುಗಳಿಂದ ಕೆಲವೊಮ್ಮೆ ಹತ್ತಿರ ಹೋಗೋಕು ಭಯ ಆಗ್ತಾ ಇತ್ತು.. !!

'ಅಕ್ಷತಾ ಮತ್ತು ದಿವ್ಯ ' ಅವ್ರು ಪಾತ್ರಗಳಿಗೆ ಕೊಡ್ತಾ ಇದ್ದ ಪ್ರಾಮುಖ್ಯತೆ ಚೆನ್ನಾಗಿ ಇತ್ತು..

'ಅನು' ರಂಗದ ಹಿಂದೆ ತೆಗದುಕೊಳ್ತಾ ಕಾಳಜಿ ಹಿಡಿಸಿತು.

'ಸ್ಮಿತಾ' ಅವ್ರು ''ಛಾಯಾ ಚಿತ್ರ ತೆಗೆಯುವ ಪೆಟ್ಟಿಗೆ' ಜೊತೆ ತಮ್ಮ ಸಮಯವನ್ನು ಕಳೆಯುತ್ತಾ ಇದ್ದಿದ್ದು , 'ಛಾಯಾ ಚಿತ್ರ' ತರಬೇತಿ ತಗೋಬೇಕು ಅನಿಸ್ತ ಇತ್ತು..

'ಗೋವಿಂದ್ ' ಮೌನ ತುಂಬಾ ಮೆಚ್ಚಿಗೆ ಆಯ್ತು..

'ಮಂಜುನಾಥ್ ಎಸ್ ' ಮನೆತನಕ ಪ್ರತಿದಿನ ಬಿಡ್ತಾ ಇದ್ದಿದ್ದು ಮಜಾ ಕೊಡ್ತಾ ಇತ್ತು..

'ಸಂತೋಷ್ ಮತ್ತು ಕೃಷ್ಣ ' ಪ್ರತಿ ಸಲ ೫ ಆಯಾಮಗಳ ಬಗ್ಗೆ ವರದಿ ಕೊಡ್ತಾ ಇದ್ದಾಗ ಮನಸ್ಸು ಖುಷಿಯಾಗುತಿತ್ತು...

'ರವಿಚಂದ್ರ' ಅವ್ರ ಮಾತುಗಳು ಹಿಡಿಸ್ತ ಇತ್ತು..

'ಅಶ್ವಿನ್ ' ಅವ್ರು ರಂಗದ ಹಿಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಕೊಡುತ್ತಿದ್ದ ಮಾಹಿತಿಗಳು ತುಂಬಾನೇ ಸಹಾಯ ಆಯ್ತು ..

'ಪಾರ್ಥ' ಮಾತಾಡ್ಸ್ತ ರೀತಿ ಖುಷಿ ಕೊಡುತ್ತಿತ್ತು...'

'ವಾಸು' ರಂಗದ ಬಗ್ಗೆ ಕೊಡುತ್ತಿದ್ದ ಮಾಹಿತಿಗಳು ಆಸಕ್ತಿದಾಯಕವಾಗಿರುತ್ತಿದ್ದವು..

'ಜೀವನ್ ಮತ್ತು ಅಜಯ್ ' ಅವರನ್ನ ಕರೆಯುತ್ತಿದ್ದ ರೀತಿ ತುಂಬಾ ತಮಾಷೆ ಕೊಡುತ್ತಿತ್ತು..

'ರೋಹಿತ್ ' ನಗು ಸಕತ್ ಇಷ್ಟ ಆಯ್ತು...

'ಹೇಮಂತ್ ' ಗೆ ರಂಗಭೂಮಿಯ ಬಗ್ಗೆ ಇರೋ ಆಸಕ್ತಿ, ಮೆಚ್ಚಿಕೊಳ್ಳಲೇ ಬೇಕು..

'ಪಲ್ಲವಿ ' ಸರಳತೆ ಇಷ್ಟ ಆಯ್ತು...

'ವಿನಯ್ ' ಕೆಲವೊಂದು ಸಲ ಕೊಡ್ತಾ ಇದ್ದ ಸಲಹೆಗಳು ಇಷ್ಟ ಆಯ್ತು.. ಅವರಿಂದ ಬೆಳಕಿನ ವಿನ್ಯಾಸದ ಬಗ್ಗೆ ತಿಳ್ಕೋಳೋ ಆಸಕ್ತಿ ಮೂಡಿದೆ..

'ಕುಲದೀಪ ' ಅಣುಕ ಇಷ್ಟ ಆಯ್ತು..

'ಕುಮಾರಸ್ವಾಮಿ ಮತ್ತು ಚಂದ್ರು' ಅವರ ಜೊತೆ ಒಡನಾಟ ಚೆನ್ನಾಗಿ ಇತ್ತು..

'ಜಗ್ಗ ಮತ್ತೆ ವಿಜಿ ' ಜೊತೆ ಮಾತು ಮಜಾ ಕೊಡ್ತಾ ಇತ್ತು..

'ಪದ್ಮ ಮತ್ತು ಅಶೋಕ್ ' ಅವ್ರ ಪ್ರಚಾರಕ್ಕೆ ಒಂದು ಸಲಾಂ.. !!

'ಹೆಚ್ ಡಿ ಕೆ ' ಬಿಟ್ಟು ಹೋಗಿದ್ದು ಮಾತ್ರ ಬೇಜಾರಾಯ್ತು.. !!

ಕೊನೆಯದಾಗಿ 'ನಾಟಕ ' ಸಾಧನೆಯ ಹಾದಿಯತ್ತ ಹೋಗ್ತಾ ಇದೆ ಅಂತ ಹೇಳೋಕೆ ತುಂಬಾನೇ ಖುಷಿ.. ಇನ್ನು ಅದನ್ನ ಉತ್ತುಂಗಕ್ಕೆ ಇರಿಸಬೇಕು ಅನ್ನೋ ಆಸೆ ಇದೆ..

ಒಂದು ತಂಡವಾಗಿ ಕೆಲಸ ಮಾಡಿದ್ರೆ ಅದಕ್ಕೆ ಯಶಸ್ಸು ಖಂಡಿತ ಅನ್ನೋಕೆ ಇದೆ ಸಾಕ್ಷಿ.... ಈ ಯಶಸ್ಸಿನ ಅಲೆಗಳು ಯಾವಾಗಲೂ ಹರಿತ ಇರಲಿ.. ಕನ್ನಡದ ರಂಗಭೂಮಿ ಆಕಾಶದೆತ್ತರಕ್ಕೆ ಬೆಳಯಲಿ..

ನನ್ ಹತ್ರ ಸದ್ಯಕ್ಕೆ ಶಬ್ದಗಳಿಲ್ಲ ಮತ್ತು ಹೇಳೋಕ್ಕೆ ..

'ಜೀವನದಲ್ಲಿ ಬೇರೆಯಾಗೋದು ಅನಿವಾರ್ಯ .. ಆದರೆ ಮತ್ತೆ ಸಿಗ್ತೀವಿ ಅನ್ನೋ ಆಶಾಭಾವ ಎಲ್ಲ ನೋವನ್ನ ಮರೆಯಿಸುತ್ತೆ.. '

ಮತ್ತೆ ಭೇಟಿಯಾಗೋಣ ..


1 comment:

  1. Thumbs up :) Tumbha chennagi bardidiya Manju :)

    ReplyDelete

About Me

My photo
Bangalore, Karnataka, India
The newest performance space in Bangalore is now open for performing arts. Kindly log in to www.khkalasoudha.org for all further information.

Followers